`ಟೈಸನ್` ಚಿತ್ರಕ್ಕೆ ಭರ್ಜರಿ ಸಾಹಸ
Posted date: 22 Fri, May 2015 – 08:01:57 AM

ದ್ರುವಿನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಟಿ.ಬಾಬುರೆಡ್ಡಿ ಅವರು ನಿರ್ಮಿಸುತ್ತಿರುವ ‘ಟೈಸನ್ ಚಿತ್ರಕ್ಕೆ ಮಾರತಹಳ್ಳಿಯ ಸೆಂಟ್ರಲ್ ಮಾಲ್‌ನಲ್ಲಿ ಭರ್ಜರಿ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆದಿದೆ. ಪಳನಿರಾಜ್ ಸಾಹಸ ನಿರ್ದೇಶನದಲ್ಲಿ ಮೂಡಿಬಂದ ಈ ಸನ್ನಿವೇಶದಲ್ಲಿ ವಿನೋದ್‌ಪ್ರಭಾಕರ್, ಗಾಯತ್ರಿ ಅಯ್ಯರ್ ಹಾಗೂ ಸಾಹಸ ಕಲಾವಿದರು ಅಭಿನಯಿಸಿದ್ದರು.
ರಾಮ್‌ನಾರಾಯಣ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಜೆಸ್ಸಿಗಿಫ಼್ಟ್, ಗಣೇಶ್ ಹಾಗೂ ಹರಿಕೃಷ್ಣ ಅವರ ಸಂಗೀತ ನಿರ್ದೇಶನವಿದೆ. ಕೆ.ಎಂ.ವಿಷ್ಣುವರ್ಧನ್ ಛಾಯಾಗ್ರಹಣ, ವೆಂಕಟೇಶ್ ಸಂಕಲನ, ಹರ್ಷ, ಮುರುಳಿ, ರಾಮು ನೃತ್ಯ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸತೀಶ್‌ಚಂದ್ರ ಶೆಟ್ಟಿ.
   ವಿನೋದ್‌ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಗಾಯತ್ರಿ ಅಯ್ಯರ್. ರವಿಕಾಳೆ, ಸುಮನ್, ಶ್ರೀನಿವಾಸಮೂರ್ತಿ, ವಿನಯಪ್ರಸಾದ್, ಚಿಕ್ಕಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed